| _version_ | 1866901099272732672 |
|---|---|
| author | ಸುಧಾ ಪಾಟೀಲ |
| author_facet | ಸುಧಾ ಪಾಟೀಲ |
| contents | <p>ಆಧುನಿಕೋತ್ತರ ಕಾಲಘಟ್ಟದಲ್ಲಿ ಮಹಿಳೆಯರು ತಮ್ಮ ಅಸ್ತಿತ್ವ ಮತ್ತು ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟವು ಸಾಹಿತ್ಯದಲ್ಲಿ ಪ್ರಬಲವಾಗಿ ಅಭಿವ್ಯಕ್ತಗೊಂಡಿದೆ. ಪರಂಪರಾಗತವಾಗಿ ಧಾರ್ಮಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಶೋಷಣೆಗೆ ಒಳಗಾದ ಮಹಿಳೆ, ಇಂದು ಶಿಕ್ಷಣ ಮತ್ತು ಸ್ವಾವಲಂಬನೆಯ ಮೂಲಕ ತನ್ನ ಸಂವೇದನೆಗಳನ್ನು ದೃಢವಾಗಿ ಮಂಡಿಸುತ್ತಿದ್ದಾಳೆ. ವಚನ ಸಾಹಿತ್ಯದಿಂದ ಹಿಡಿದು ಸಮಕಾಲೀನ ಬರಹಗಾರ್ತಿಯರಾದ ವೈದೇಹಿ, ಸಾರಾ ಅಬೂಕ್ಕರ್, ಮಾಲತಿ ಪಟ್ಟಣಶೆಟ್ಟಿ ಮುಂತಾದವರ ಕೃತಿಗಳಲ್ಲಿನ ಸ್ತ್ರೀಪರ ದನಿಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಭ್ರೂಣ ಹತ್ಯೆ, ಕೌಟುಂಬಿಕ ದೌರ್ಜನ್ಯ ಮತ್ತು ಅಸಮಾನತೆಯ ವಿರುದ್ಧದ ಆಕ್ರೋಶವು ಸಾಹಿತ್ಯದ ಮೂಲಕ ಹೇಗೆ ಪ್ರತಿಫಲಿಸಿದೆ ಎಂಬುದನ್ನು ಗುರುತಿಸಲಾಗಿದೆ. ಜಾನಪದ ಹಾಗೂ ಶಿಷ್ಟ ಸಾಹಿತ್ಯದ ಹಿನ್ನೆಲೆಯಲ್ಲಿ, ಮಹಿಳೆ ತಾನು ಅಬಲೆಯಲ್ಲ ಸಬಲೆ ಎಂದು ನಿರೂಪಿಸುವ ಬಗೆ ಮತ್ತು ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ನೆಲೆಗಳನ್ನು ಈ ಬರಹವು ಶೋಧಿಸುತ್ತದೆ.</p> |
| format | Recurso digital |
| id | zenodo_https___doi_org_10_5281_zenodo_18701532 |
| institution | Zenodo |
| language | kan |
| publishDate | 2026 |
| publisher | Zenodo |
| record_format | zenodo |
| spellingShingle | ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ ಸುಧಾ ಪಾಟೀಲ ಆಧುನಿಕೋತ್ತರ ಸ್ತ್ರೀ ಸಂವೇದನೆ ಮಹಿಳಾ ಸಾಹಿತ್ಯ ಅಸ್ಮಿತೆ ಮತ್ತು ಪ್ರತಿರೋಧ ಪುರುಷ ಪ್ರಧಾನ ವ್ಯವಸ್ಥೆ ಸಾಮಾಜಿಕ ನ್ಯಾಯ <p>ಆಧುನಿಕೋತ್ತರ ಕಾಲಘಟ್ಟದಲ್ಲಿ ಮಹಿಳೆಯರು ತಮ್ಮ ಅಸ್ತಿತ್ವ ಮತ್ತು ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟವು ಸಾಹಿತ್ಯದಲ್ಲಿ ಪ್ರಬಲವಾಗಿ ಅಭಿವ್ಯಕ್ತಗೊಂಡಿದೆ. ಪರಂಪರಾಗತವಾಗಿ ಧಾರ್ಮಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಶೋಷಣೆಗೆ ಒಳಗಾದ ಮಹಿಳೆ, ಇಂದು ಶಿಕ್ಷಣ ಮತ್ತು ಸ್ವಾವಲಂಬನೆಯ ಮೂಲಕ ತನ್ನ ಸಂವೇದನೆಗಳನ್ನು ದೃಢವಾಗಿ ಮಂಡಿಸುತ್ತಿದ್ದಾಳೆ. ವಚನ ಸಾಹಿತ್ಯದಿಂದ ಹಿಡಿದು ಸಮಕಾಲೀನ ಬರಹಗಾರ್ತಿಯರಾದ ವೈದೇಹಿ, ಸಾರಾ ಅಬೂಕ್ಕರ್, ಮಾಲತಿ ಪಟ್ಟಣಶೆಟ್ಟಿ ಮುಂತಾದವರ ಕೃತಿಗಳಲ್ಲಿನ ಸ್ತ್ರೀಪರ ದನಿಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಭ್ರೂಣ ಹತ್ಯೆ, ಕೌಟುಂಬಿಕ ದೌರ್ಜನ್ಯ ಮತ್ತು ಅಸಮಾನತೆಯ ವಿರುದ್ಧದ ಆಕ್ರೋಶವು ಸಾಹಿತ್ಯದ ಮೂಲಕ ಹೇಗೆ ಪ್ರತಿಫಲಿಸಿದೆ ಎಂಬುದನ್ನು ಗುರುತಿಸಲಾಗಿದೆ. ಜಾನಪದ ಹಾಗೂ ಶಿಷ್ಟ ಸಾಹಿತ್ಯದ ಹಿನ್ನೆಲೆಯಲ್ಲಿ, ಮಹಿಳೆ ತಾನು ಅಬಲೆಯಲ್ಲ ಸಬಲೆ ಎಂದು ನಿರೂಪಿಸುವ ಬಗೆ ಮತ್ತು ಪುರುಷಪ್ರಧಾನ ವ್ಯವಸ್ಥೆಯ ವಿರುದ್ಧದ ಪ್ರತಿರೋಧದ ನೆಲೆಗಳನ್ನು ಈ ಬರಹವು ಶೋಧಿಸುತ್ತದೆ.</p> |
| title | ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಕಾಲದ ಸ್ತ್ರೀವಾದಿ ಸಂವೇದನೆ |
| topic | ಆಧುನಿಕೋತ್ತರ ಸ್ತ್ರೀ ಸಂವೇದನೆ ಮಹಿಳಾ ಸಾಹಿತ್ಯ ಅಸ್ಮಿತೆ ಮತ್ತು ಪ್ರತಿರೋಧ ಪುರುಷ ಪ್ರಧಾನ ವ್ಯವಸ್ಥೆ ಸಾಮಾಜಿಕ ನ್ಯಾಯ |
| url | https://doi.org/10.5281/zenodo.18701532 |